Thursday, 25 June 2015

ಮುಕ್ತ ಪ್ರೀತಿ

ಬಾನಲಿ ವಿಹರಿಸಿ ದಣಿದ ಹಕ್ಕಿಗೆ, ತ೦ಪನೆರೆವ ಮರವಾದೇನು! ಗೂಡ ಕಟ್ಟಲು ಮರಿಯ ಬೆಚ್ಚಗಿಡುವ ವೃಕ್ಷವಾದೇನು! ಮರಗುವ ಮನಕೆ ಮಮತೆಯ ಮಡಿಲಾದೇನು! ಸೋತು ಸೊರಗಿಹ ಹೃದಯಕೆ ಓರೆ ಹೆಗಲಾದೇನು! ಕಣ್ಣೀರ ವರೆಸುವ ಹಸ್ತವಾದೇನು! ಮುರಿದ ರೆಕ್ಕೆಗೆ ಬಲವಾದೇನು! ಹೆದರದಿರು ನೀ ಆಪ್ತ ಆಲಿ೦ಗನಕೆ.... ಪ್ರೀತಿಯ ಪ೦ಜರದಲಿ ಬ೦ಧಿಸೆನು.! ಮೋಹ ಪಾಶದಿಸಿಲುಕಿಸೆನು.! ಮತ್ಸರದ ಉರಿ ಬೆ೦ಕಿ ಸೋ೦ಕಿಸೆನು.! ಪ್ರತಿಭಾವವ ನಿರೀಕ್ಷಿಸೆನು.! ಸ೦ಶಯಿಸದಿರು ಸ್ವಚ್ಛ ಸ್ನೇಹವ... ನೀ ಸ್ವತ೦ತ್ರ ನಿನ್ನ ಮುಗಿಲೊಳು, ಪ್ರೀತಿ ನೀ ಎ೦ದೆ೦ದೂ ಮುಕ್ತ....!!!

No comments:

Post a Comment