Thursday, 26 July 2012

ಹಿಮತಾಪ

ಕಿಟಕಿಯಿಂದ ಹೊರಗೆ ಹಿಮದ ಮಣಿಗಳನ್ನು ನೋಡುತ್ತಿದ್ದ ನನಗನ್ನಿಸಿದ್ದು, ಹೌದು snow fall ನೋಡಬೇಕೆಂಬುದು ಬಹಳ ದಿನಗಳ ಕನಸು... ಅದು ನನಸಾಗುತ್ತದೋ ಇಲ್ಲವೋ ಎಂದೂ ಯೋಚಿಸದೆ Career nalli ಮುಳುಗಿದ ನನಗೆ ಮೊದಲ ಮಂಜಿನ ಮಳೆಯನ್ನೂ ನೋಡಿ ಹಳೆಯ ಹುದುಗಿದ ಕನಸುಕಣ್ಣ ಮುಂದಿದೆ ಎಂದು ಹಿರಿ ಹಿರಿ ಹಿಗ್ಗಿದರೂ.... ನಂತರದಲಿ ನಾಲ್ಕು ಗೋಡೆಗಳ ಮಧ್ಯೆಯೇ ಇರುವಂತೆ ಮಾಡುವ ಹಿಮಪಾತ...ಹಿಮತಾಪವಾಗಿ ನಿರಾಶಾವಾದಿ ಎನಿಸಿತು... ಹಸಿರು, ಸ್ಪೂರ್ತಿಯ ಚಿಲುಮೆ... ಚೇತನದ ಆಗರ.... ಶುಭ್ರ ಶ್ವೇತವರ್ಣದ ಹಿಮದ ಮಣಿಗಳು ಶಾಂತಿಯ ಸಂಕೇತ.... ಮೈಸೂರಿನಲ್ಲಿ ಹುಟ್ಟಿ ಮಲೆನಾಡ ಹುಡುಗನ ಕೈ ಹಿಡಿದು ಹಸಿರ ಸಿರಿಯಲ್ಲಿ ನಮ್ಮವರ ಜೊತೆ ಜೀವಿಸಿದ ನನಗೆ, ಏಕೋ ಈಗ ಹಸಿರ ಹಾಸಿನ ಮೇಲೆ... ನೀಲಿಯಾಗಸದ ಚಪ್ಪರದ ಕೆಳಗೆ  ಕನ್ನಡದ ಗೀತೆಯೊಂದನ್ನು ಗುನುಗುನಿಸುತ್ತಾ.... ಕನ್ನಡದ ನೆಲದಲ್ಲಿ ಅಲೆದಾಡುವ ಆಸೆ..... "ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ "....

ದಿವ್ಯ-ವನ